Thursday 4 December 2014

ಹೀಗೆ ಸುಮ್ಮನೆ

ಭೇಟಿ 
ತಪ್ಪು ಒಪ್ಪುಗಳಾಚೆ
ಬೇಕು ಬೇಡಗಳ ದಾಟಿ
ನನ್ನ ಮನಸ್ಸಿನ  ನಿನ್ನ ಕನಸಿನ  ಭೇಟಿ

ನೆನಪು ಮರೆವುಗಳಾಚೆ,
ಮೋಡ ನಕ್ಷತ್ರಗಳ  ದಾಟಿ 
ನನ್ನ ಹಾಡಿನ ನಿನ್ನ ಧ್ವನಿಯ ಭೇಟಿ 

ಜೀವ  ಸಾವಿನಾಚೆ ,
ಸರಸ  ವಿರಸಗಳ  ಧಾಟಿ ,
ನನ್ನ ಹರಕೆಯ ನಿನ್ನ ಬಯಕೆಯ ಭೇಟಿ 

ಮಾಜಿ ಪ್ರೇಮಿ

ಮೋಡದ ಮರೆಯಲಿ 
ಮಾಸಿದ ಚಂದ್ರನಂತೆ ,
ಯಾರೋ ತೇಲಿಬಿಟ್ಟ 
ಕಾಗದದ ದೋಣಿಯಂತೆ, 
ಅಗೋಚರವ ಕಾಣಲು 
ಹೋರಟ ಅಘೋರಿಯಂತೆ,
ಸುಟ್ಟು ಹೋದ ಕಟ್ಟಿಗೆಯ 
ಬಿಸಿ ಬೂದಿಯಂತೆ,
ಸತ್ತುಹೋದ  ದೇಹದ 
ನೀಲಿ ರಕ್ತದಂತೆ ,
ಬದುಕುತ್ತಿರುವ 
ಇಂತಿ ನಿನ್ನಯ 
ಮಾಜಿ ಪ್ರೇಮಿ 


ಹಾಡು 
ಕನಸಿನ  ಹಿನ್ನಲೆಯಲ್ಲಿ ,
ಕಾನನದ ಕತ್ತಲೆಯಲ್ಲಿ,
ಭೋರ್ಗರೆಯುವ ಜಲಪಾತದ  ಮರೆಯಲ್ಲಿ,
ನಿಗೂಢ  ಕಥೆಯೊಂದು ಮುಗಿದಾಗ ,
ಮಾತೆಲ್ಲಾ ಬರಿದಾದಾಗ , 
ಪ್ರೀತಿಯ ಅರಿವಾದಾಗ,
ಧ್ಯಾನದ ಕೊನೆಯಲ್ಲಿ 
ಮೂಡಿತ್ತು ಈ ಹಾಡು 


Monday 18 February 2013

Ninnolumeyinda


ನಿನ್ನೊಲುಮೆಯಿಂದ 


ನನ್ನ ಕನಸುಗಳ ಹೆಸರು ನೀನು,
ನಿನ್ನ ಉಸಿರಿನ ಬಿಸಿಯು ನಾನು

ತಿದ್ದಿ ತಿಡಿ ಬರೆದ ಪದವೊಂದು ನಾನು,
ಆ ಪದದ ಭಾವಾರ್ಥವು ನೀನು

ನಿನ್ನ ಮುಂಗುರಿಳಿನಿಂದ ಜಾರಿ ಬಿದ್ದು,
ಕೆನ್ನೆಯ ಮೇಲೆ ಮೂಡಿದ ಗುಳಿಯು ನಾನು,
ಕಳೆದುಹೋದ  ಸಮಯದ
ಕಳೆಗುಂದದ ನೆನಪೊಂದು ನೀನು

ನಿನ್ನ ಭಾವ ಬಿಂಬಕೆ
ಕೈಗನ್ನಡಿಯು ನಾನು,
ಇಳಿ ಸಂಜೆಯ ತಂಗಾಳಿಯಲ್ಲಿ
ತೇಲಿ ಬಂದ ಕಂಪು ನೀನು


ನಿನ್ನ ಕಣ್ಣಿನ ರೆಪ್ಪೆಯ ನೆರಳಲಿ
ನನ್ನದೊಂದು  ಪ್ರೀತಿಯ ಗೂಡು,
ನಿನ್ನ ತುಟಿಯ ಅಂಚಿನಲಿ ಮೂಡಿತು
ಈ  ನಲುಮೆಯ  ಹಾಡು











Friday 20 July 2012

ಭಾವ ಬಿಂಬ

ಅರಿವು
ಭಾವನೆಗಳಿಗಿಲ್ಲ ಮಿತಿ ,
ಶಬ್ದಗಳಿಗೆ ಮಾತ್ರ ಕೊರತೆ
ದುಃಖಕ್ಕಿಲ್ಲ ಕೊನೆ ,
ಅದಕ್ಕೆ ನಗುವುದ ಕಲಿತೆ .
ಅಜ್ಞಾನ ಮರೆಯದ ಕತ್ತಲು ,
ಇರಲಿ ವಿದ್ಯೆಯ ಹಣತೆ.




ತಿಳಿದಷ್ಟು
ಕಂಡಷ್ಟು ಕಾಣದಷ್ಟು ,
ಜಗತ್ತು  ನೋಡಿದಷ್ಟು ನೋಡುವಷ್ಟು
ಗಳಿಸಿದೆಷ್ಟು ಉಳಿಸಿದೆಷ್ಟು ,
ಹಣದ ದಾಹ ಎಂದಿಗೋ ಮುಗಿಯಲಾರದಷ್ಟು
ಕೊಟ್ಟಷ್ಟು  ಪಡೆದಷ್ಟು ಪ್ರೀತಿಯ ಖಜಾನೆ ಬರಿದಾಗದಷ್ಟು 



ನೀನು  
ಭಾವವೆಲ್ಲಾ  ಬರಿದಾದಾಗ 
ನೋವೆಲ್ಲಾ  ಮರೆಯಲಾದಾಗ 
ಬಾಳಿನ ಅರ್ಥವೇ ಮುಗಿದಾಗ 
ನಿನ್ನ ಮಾತು ನೆಮ್ಮದಿಯ ಸೆಲೆ 

Wednesday 23 November 2011

ನೆನಪಿನಾಳದಿಂದ

"ಅರೇ! ಈ ಹುಡುಗಿ, ಎಲ್ಲೋ ನೋಡಿರೋ ಹಾಗಿದೆ, ಆದ್ರೆ ಯಾರೂಂತ   ಹೊಳಿತ್ತಿಲ್ಲ, ತುಂಬಾ ಹಳೆ ಪರಿಚಯ ಅನ್ಸುತ್ತೆ. ಛೇ! ಹಾಳಾಗ್  ಹೋಗ್ಲಿ ನೋಡೋಣ್, ಅವಳೇ ಬಂದು ಮಾತಾಡಿಸಿದ್ರೆ ನೆನಪಿಗೆ ಬರಬಹುದು".  ನಾನು ನಮ್ಮೂರಿಂದ ಬೆಂಗಳೂರಿಗೆ ಬರೋವಾಗ ಬಸ್ ನಲ್ಲಿ  ಕಾಣ್ಸಿತ್ತು ಅವಳ ಮುಖ, ಯಾಕೋ ಏನೋ ಹೋಗಿ ಅವಳನ್ನೇ ಕೇಳ್ಬಿಡೋಣ ಅನಿಸಿತ್ತು, ಸುಮ್ನೆ ಯಾಕೆ ಇರ್ಲಿ ಬಿಡು ಅಂತಾ ಸುಮ್ಮನ್ನಿದ್ದೆ. ಅಷ್ಟರಲ್ಲೇ ಬಸ್ಸು ನಿಂತಿತು, ಕಂಡಕ್ಟರ್ ಊಟಕ್ಕಾಗಿ ೨೦ ನಿಮಿಷ ಎಂದು ಕಿರುಚಿದ. ನಾನು ಬಸ್ಸಿಂದ ಇಳಿದು ಊಟಕ್ಕೆ ಹೋಟಲ ಕಡೆ ಹೊರಟೆ. ಊಟದ ಕೊನೆಯಲ್ಲಿ ಸ್ವೀಟು ಕೊಟ್ಟಾಗಲೇ ನೆನಪಾಗಿದ್ದು ಅವ್ಳು ಮಿಠಾಯಿ ಹುಡುಗಿ!

ಹಾ, ಹೌದು ಮಿಠಾಯಿ ಹುಡುಗಿ. ಅವಳನ್ನ ಮೊದಲನ್ನೇ ಬಾರಿ ನೋಡಿದ್ದು ಮಿಠಾಯಿ ಅಂಗಡಿಯಲ್ಲಿ, ಆವತ್ತು ಎಸ್ ಎಸ್ ಎಲ್ ಸಿ  ರಿಸಲ್ಟ್ ಬಂದಿತ್ತು. ನಾನು ನಮ್ಮಪ್ಪನ ಜೊತೆ ಮಿಠಾಯಿ ಅಂಗಡಿ ಹೋಗ್ಗಿದ್ದಾಗ, ಅವ್ಳು ಅಲ್ಲೇ ಬಂದಿದ್ಳು ಅದೇ ಕಾರಣಕ್ಕಾಗಿ. ಆವತ್ತು ನಾನು ನನ್ನ್ನದೆ ಲೋಕದಲ್ಲಿದ್ದೆ , ಅವಳ ಬಗ್ಗೆ ಗಮನ ಕೊಡ್ಲೆ ಇಲ್ಲಾ, ಆಮೇಲೆ ಅವಳನ್ನ ನೋಡಿದ್ದು ಯಾವ್ದು ಕಾಲೇಜಲ್ಲಿ ಪ್ರವೇಶ ಪರೀಕ್ಷೆ ಬರೋಯೋಕ್ಕೆ ಹೋದಾಗ, ನೋಡಿದಾಕ್ಷಣ ಅವಳೇ ನಕ್ಕಿದಳು. ಅದು ಹಳೇ ಪರಿಚಯದ ನಗು ಇರಬೇಕು, ನಾನು ನಕ್ಕು ಸುಮ್ಮನಾದೆ. ನಂತರ ತುಂಬಾ ದಿನದವರೆಗೆ ಅವಳು ಕಾಣಿಸಲೇ ಇಲ್ಲಾ. 


ನಾನಿದದ್ದು ತುಂಬಾ ಸಣ್ಣ ಊರು, ಆದ್ದರಿಂದ  ಆವಾಗ - ಆವಾಗ ನಮ್ಮಿಬ್ಬರ ಮುಖಾ-ಮುಖಿ ಆಗ್ತಾನೇ ಇತ್ತು. ಅವಳನ್ನ ಕಂಡಾಗಲೆಲ್ಲ ಸುಮ್ನೆ  ಮಾತಾಡುವ ಚಡಪಡಿಕೆ ಆಗ್ತಾ ಇತ್ತು, ಆದ್ರೆ ಮನಸಲ್ಲಿ ಏನೋ ಒಂಥರಾ ಭಯ ಅಥವಾ ಅಳಕು ಇತ್ತು. ಅದಕ್ಕೆ ನೋಡಿದಾಗಲೆಲ್ಲ ಸುಮ್ನೆ ಕಣ್ಣಲ್ಲೇ ಹಾಯ್  ಎಂದು ಸುಮ್ಮನಾಗ್ತಿದೆ. 

ವಿಧಿ ಬರಹ! ಮತ್ತೆ ನಮ್ಮಿಬ್ಬರಿಗೂ ನಮ್ಮೂರಿನ ಏಕೈಕ ಇಂಜಿನಿಯರಿಂಗ ಕಾಲೇಜಲ್ಲಿ  ಅಡ್ಮಿಶನ ಸಿಕ್ಕಿತ್ತು (ಬೇರೆ ಬೇರೆ ಬ್ರಾಂಚು. :-( ). ಕೊನೆಗೂ ಒಂದಿನ ನಾವಿಬ್ರು ಮಾತಾಡು ಅವಕಾಶ ಬಂತು. ಮದ್ಯಾಹ್ನದ ಸಮಯ, ಅದು ನಮ್ಮ ಕಾಲೇಜಿನ  ಬೈಕ್ ಸ್ಟಾಂಡ್, ನಾನು ಬೈಕ್ ತೆಗೆದು ಮನೆಗೆ ಹೋಗಬೇಕೆನ್ನುವಷ್ಟರಲ್ಲಿ ಅವ್ಳು  ಅಲ್ಲೇ ಗಾಡಿ ತೆಗೆಯೋಕ್ಕೆ ಹರ ಸಾಹಸ ಮಾಡ್ತಾ ಇದ್ದಳು. ನಾನು ಹೋಗಿ ಗಾಡಿ ತೆಗೆಯೋಕ್ಕೆ ಸಹಾಯ ಮಾಡ್ದೆ. ಮತ್ತೆ ನಕ್ಕ್ಳು, ಈ ಸಾರಿ ಥ್ಯಾಂಕ್ಸ ಹೇಳೋ ನಗು ಇರಬೇಕು. ಅವತ್ತೇ ಮೊದಲನೇ ಬಾರಿ ಅವಳ ಜೊತೆ ಮಾತಾಡಿದ್ದು. ಪೂರ್ತಿ ೧ ಘಂಟೆ, ಅವಕಾಶ ಸಿಕ್ಕಿದ್ದೇ ತಡ ೧೦ ವರ್ಷಗಳಿಂದ ಏನೇನ ಮಾತಾಡಬೇಕಿತ್ತು ಅದೆಲ್ಲಾ ಮಾತಾಡ ಬಿಟ್ಟೆ. ಅವಳು ಖುಷಿಯಾಗಿ ಮಾತಾಡತ್ತಿದ್ದದ್ದು ನೋಡಿ ನಂಗೂನೂ ಖುಷಿಯಾಗಿತ್ತು. ಆವತ್ತು ಅವಳ ಜೊತೆ ಮಾತಾಡಿದ ಮೇಲೆ ಮನದಲ್ಲಿದ್ದ ಕೋಲಾಹಲ ಕಡಿಮೆಯಾಗಿತ್ತು, ಒಂಥರಾ ಶಾಂತ ಸರೋವರ ತರಹ! ಆಮೇಲೆ ಯಾವತ್ತು ಮಾತಾಡೋ ಅವಕಾಶಾನೇ ಸಿಗಲ್ಲಿಲ್ವಾ ಅಥವಾ ನಾವೇ ಮಾತಾಡೋ ಮನಸ್ಸೇ ಮಾಡಲ್ಲಿಲ್ಲ್ವಾ ಅಂತಾನೇ ತಿಳಿಲ್ಲಿಲ್ಲಾ. ನಾವು ಮಾತಾಡ್ದೆ ಇರದಿದ್ರು ನಂಗೆ ಅವಳ ಬಗ್ಗೆ, ಅವಳಿಗೆ ನನ್ನ ಬಗ್ಗೆ  ಎಲ್ಲಾನೂ ಗೊತ್ತಿರತ್ತಿತ್ತು.  ನೋಡ್ತಾ - ನೋಡ್ತಾ ೪ ವರ್ಷ ಕಳದೆ ಹೋಯ್ತು. ಕಾಲೇಜಿನ  ಕೊನೆ ದಿನ ಎಲ್ಲಾ ಸ್ನೇಹಿತರ ಕಣ್ ತಪ್ಪಿಸಿ ಕೊನೆದಾಗಿ "ಆಲ್ ದ ಬೆಸ್ಟ್" ಅಂತ ಹೇಳಿ ಬಂದಬಿಟ್ಟೆ. 

ನಂತರ ಅವಳನ್ನ ನೋಡಿದ್ದೇ ಅಪರೂಪ ಇರಬೇಕು. ನಾನು ಕೆಲಸಕ್ಕಾಗಿ ಬೆಂಗಳೂರಿಗೆ ಬಂದಬಿಟ್ಟಿದೆ, ನೌಕರಿ ಸಿಗೊವರೆಗೋ ಮನಸ್ಸಿಗೆ ಸಮಾಧಾನಾನೇ ಇರಲ್ಲಿಲ್ಲ. ನೌಕರಿ ಸಿಕ್ಕಿದೆ ತಡ ಅವಳನ್ನ ಹೇಳಬಿಡೋಣ ಅನಿಸಿತ್ತು ಆದ್ರೆ ಏನ್ ಮಾಡೋದು ಅವಳ ಫೋನ ನಂಬರ ಆಗಲಿ ಅಥವಾ ಮೇಲ್- ಐಡಿ ಇರಲೇ ಇಲ್ಲಾ. ಊರಿಗ್ ಹೋದಾಗ್ ನೋಡೋಣ ಅನ್ಕೊಂಡಿದ್ದೆ. ಅದು ಕೊಡ ಆಯ್ತು, ಒಂದ್ಸಾರಿ ಊರಿಗ ಹೋದಾಗ ನೋಡ್ದೆ ಆದ್ರೆ ಅವರಮ್ಮ ಜೊತೇಲೆ ಇದ್ದದ್ದು ನೋಡಿ ಹಾಯ್ ಅಂತ ಹೇಳಿದಷ್ಟೇ ನಿಜ ಮಾತಾಡ್ಸೋ ಧೈರ್ಯ  ಮಾಡಿರಲ್ಲಿಲ್ಲ. ಒಂದಿನ ಅಮ್ಮನ ಜೊತೆ ಮಾತಾಡೋವಾಗ ಅವ್ಳು ನಮ್ಮ ಕಾಲೇಜಲ್ಲೇ ಲೆಕ್ಚರರ ಆಗಿ ಕೆಲ್ಸಾ ಮಾಡ್ತ್ತಿದ್ದಾಳೆ ಅಂತಾ ಗೊತ್ತಾಗಿದ್ದು. ಇದಾದ ನಂತರ  ಒಂದ್ಸಾರಿ ಕಾಲೇಜ್ ಕಡೆ ಕೂಡ ಹೋಗಿದ್ದೆ, ಆದ್ರೆ ನಾನ್ ಹೋಗಿದ್ದ ದಿನನೇ ಅವ್ಳು ಯಾವ್ದೋ ಕ್ಲಾಸ್ ತೊಗೊತಾ ಇದ್ಳು, ಹಾಳಾಗ್ ಹೋಯ್ತು ಅಂತ ನಾನ್ ಮನೆಗೆ ಬಂದ್ಬಿಟ್ಟೆ. ಇನ್ನೊದ್ಸಾರಿ ಕಾಲೇಜ ಕಡೆ ಹೋಗೋ ಮನಸ್ಸೇ ಆಗ್ಲಿಲ್ಲ.

ಅವತ್ತಿಂದ ಇವತ್ತಿನವರೆಗೆ ಒಂದು - ಒಂದುವರೆ ವರ್ಷ ಆಗಿರಬೇಕು, ಬಸ್ಸಿಂದ ಇಳಿದ ಮೇಲೆ ಮಾತಾಡ್ಸೆ ಬಿಡೋಣ ಅಂತ ನಿರ್ಧಾರ ಮಾಡ್ದೆ . ಬೆಳ್ಳಗೆ ಆನಂದರಾವ್ ಸರ್ಕಲ್ ನಲ್ಲಿ  ಬಸ್ಸ ನಿಂತಾಗ, ನಾನು ಅವ್ಳು ಬಸ್ಸಿಂದ ಇಳಿಯೋ ತನಕ ಕಾಯ್ತಾ ಇದ್ದೆ. ಅವ್ಳು ಬಂದಳು, ಅವಳ "ಅವ್ರು" ಜೊತೇಲಿ  ಇದ್ದಿದ್ದ್ರು . ಹೌದು ಅವಳಿಗೆ ಮದ್ವೆ ಆಗಿತ್ತು, ಪರಿಚಯ ಮಾಡ್ಸಿದ್ದಳು , ಖುಷಿಯಾಗಿ ಎಲ್ಲಾನೂ ಹೇಳ್ತಿದ್ದ್ಳು. ಮದ್ವೆ ಹೇಳೋಕ್ಕೆ ಮರೆತೋಗಿತ್ತು , ಮುಂದಿನ ಸಲ ಏನಾದ್ರೂ ಇದ್ರೆ ಮರಿದೆ ಕರಿತಿನಿ ಅಂತ ಹೇಳಿದ್ಳು. ನಂಗೂ ಖುಷಿಯಾಯ್ತು, ಅವಳ ಅವ್ರು ಕೂಡ  ಚೆನ್ನಾಗಿ ಮಾತಾಡ್ಸಿದ್ದ. ಇಬ್ಬ್ರಿಗೂ ಒಳ್ಳೆದಾಗಲಿ ಅಂತ ಹೇಳಿ ಬಂದೆ. ನಾನ್ ಕೇಳ್ ಬೇಕಾಗ್ಗಿದ್ದ ಪ್ರಶ್ನೆಗಳಿಗೆಲ್ಲಾ ಅರ್ಥಾನೇ ಇರಲ್ಲಿಲ್ಲಾ.